ಸಾಧನೆಗಳು

|

ಸಾಧನೆಗಳು (Achievements)

ಕ್ರೀಡಾ ಸಾಧನೆಗಳು

ತನ್ನ ಕಾರ್ಯ ಚಟುವಟಿಕೆಯ ಮೊದಲ ವರ್ಷದಲ್ಲಿ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಮತ್ತು ಅದರ ವಿದ್ಯಾರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಸಾಧಕರ ಹಾದಿಯನ್ನು ಅನುಸರಿಸಿದ್ದಾರೆ. ವಾಣಿಜ್ಯ ನಿರ್ವಹಣೆ ಮತ್ತು ಕಂಪ್ಯೂಟರ್ ಕೋರ್ಸ್ಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ಉತ್ಕ್ರಷ್ಟರಾಗಲು ವಿದ್ಯಾರ್ಥಿಗಳಿಗೆ ಉತ್ಕ್ರಷ್ಟತೆಯ ಹಾದಿಯನ್ನು ತೋರಿಸಲಾಗುತ್ತಿದೆ. ಅವರೆಲ್ಲರೂ ಉತ್ತಮವಾಗಿ ತಯಾರಾಗುತ್ತಿದ್ದು, ಶೀಘ್ರದಲ್ಲೇ ನಮ್ಮ ಕಾಲೇಜು ಹೆಸರುವಾಸಿಯಾಗಿ ಗುರುತಿಸಿಕೊಳ್ಳುತ್ತದೆ ಎಂಬ ನಂಬಿಕೆಯ ಭರವಸೆ ನಮ್ಮಲ್ಲಿದೆ. ಶೈಕ್ಷಣಿಕ ರಂಗದಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವುದರ ಜೊತೆಗೆ, ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

೨೦೧೮-೧೯ ವರದಿ

  • check icon ದಿನಾಂಕ ೨೨.೦೨. ೨೦೧೯ ರಿಂದ ೨೪. ೦೨.೨೦೧೯ ರವರೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿರುವರು.
  • check icon ಪಿ.ಇ.ಎಸ್ . ಕಾಲೇಜು, ಮಂಡ್ಯ ಆಯೋಜಿಸಿದ್ದ ಅಂತರ ಕಾಲೇಜು ಮತ್ತು ಅಂತರವಲಯ ಮಟ್ಟದ ಪುರುಷರ ಟೇಬಲ್ ಟೆನ್ನಿಸ್ ಟೂರ್ನಮೆಂಟ್ನಲ್ಲಿ ನಮ್ಮ ಕಾಲೇಜು ತಂಡ ಕ್ವಾರ್ಟರ್ ಫೈನಲ್ವರೆಗೆ ಅರ್ಹತೆ ಪಡೆದಿದೆ.
  • check icon ಎಸ್.ಇ.ಟಿ. ಅಂತರ ಕಾಲೇಜು ಪವರ್ ಲಿಫ್ಟಿಂಗ್ ಪುರುಷರು ಮತ್ತು ಮಹಿಳಾ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದಿದ್ದಾರೆ.
  • check icon ದಿನಾಂಕ ೧೬.೦೨.೨೦೧೯ ರಂದು ಕರ್ನಾಟಕದ ದಾಂಡೇಲಿಯಲ್ಲಿ ಶೇಷಾದ್ರಿಪುರಂ ಮುಖ್ಯ ಕಾಲೇಜು ಆಯೋಜಿಸಿದ್ದ ಕ್ರೀಡೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ವಿದ್ಯಾರ್ಥಿಗಳನ್ನು ಚಾರಣ ಮತ್ತು ರ್ಯಾಫ್ಟಿಂಗ್ನಲ್ಲಿ ಭಾಗವಹಿಸಲು ದಾಂಡೇಲಿಗೆ ಕರೆದೊಯ್ದಿದ್ದರು.
  • check icon ವಿಶಾಖಪಟ್ಟಣದಲ್ಲಿ ದಿನಾಂಕ ೦೨ನೇ ಡಿಸೆಂಬರ್ ೨೦೧೪ ರಿಂದ ೦೫ನೇ ಡಿಸೆಂಬರ್ ೨೦೧೮ ರವರೆಗೆ ನಡೆದ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿ ಅಂತಿಮ ವರ್ಷದ ಬಿ.ಕಾಂ ನ ಶ್ರೀ ಚಂದ್ರಶೇಖರ್ ಮತ್ತು ಶ್ರೀ ಮನೋಜ್ ಅವರು ಭಾಗವಸಿದ್ದರು.
  • check icon ಮೈಸೂರಿನ ಎನ್.ಐ.ಈ. ಕಾಲೇಜು ಆಯೋಜಿಸಿದ್ದ ೧೦ನೇ ಸೆಪ್ಟೆಂಬರ್ ೨೦೧೮ರಲ್ಲಿ ಯುನಿವರ್ಸಿಟಿ ಸ್ಪೋರ್ಟ್ಸ್ ಪೆವಿಲಿಯನ್ ನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಚಾಮುಂಡಿ ವಲಯದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜಿನ ತಂಡ ಜಯಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು.
  • check icon ದಿನಾಂಕ ೦೬/೦೯/೨೦೧೮ ರಂದು ಸ್ಪೋರ್ಟ್ಸ್ ಪೆವಿಲಿಯನ್ ಗ್ರೌಂಡ್ ಮೈಸೂರು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ವೈಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಶ್ರೀ ಪವನ್ ಶ್ರೀನಿವಾಸ್ ಎ. ಎಸ್ , ಬಿಬಿಎ ೩ನೇ ಸೆಮಿಸ್ಟರ್ ಕಂಚಿನ ಪದಕವನ್ನು ಗೆದ್ದುಕೊಂಡರು.
  • check icon ಸರಸ್ವತಿಪುರಂನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ದಿನಾಂಕ ೦೫/೦೯/೨೦೧೮ ರಿಂದ ೦೭/೦೯/೨೦೧೮ ರವರೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಈಜು ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಶ್ರೀ ಪೌರುಷ್ ಬಿ. ದ್ವಿತೀಯ ಬಿ.ಕಾಂ ಮೂರನೇಯ ಚಾತುರ್ಮಾಸ, ಇವರು ವಿಜೇತರಾಗಿ ಮೂರು ಚಿನ್ನದ ಪದಕಗಳು ಮತ್ತು ಮೂರು ಬೆಳ್ಳಿಯ ಪದಕಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ಕಾಲೇಜಿಗೆ ರನ್ನರ್ ಅಪ್ ಚಾಂಪಿಯನ್ಶಿಪ್ ದೊರೆತಿದೆ.
  • check icon ಮೈಸೂರು ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ದಿನಾಂಕ ೨೧-೦೮-೨೦೧೮ ರಂದು ನಡೆದ ಮೈಸೂರು ನಗರ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಪುರುಷೋತ್ತಮ್, ತೃತೀಯ ಬಿ.ಕಾಂ ೫ನೇ ಚತುರ್ಮಾಸ, ಇವರು ವಿಜೇತರಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಕ್ರೀಡಾ ಚಟುವಟಿಕೆ ವರದಿ ೨೦೧೭-೦೮

ನಮ್ಮ ಸಂಸ್ಥೆ ಶೇಷಾದ್ರಿಪುರಂ ಪದವಿ ಕಾಲೇಜು ಮೈಸೂರು ಇಲ್ಲಿ ದಿನಾಂಕ್ ೧೧-೦೮-೨೦೧೮ರ ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯ ಚಾಮುಂಡಿ ವಲಯ ಅಂತರ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಒಟ್ಟು ಕಾಲೇಜುಗಳ ಸಂಖ್ಯೆ ೧೪.

ಪ್ರಥಮ ಸ್ಥಾನವನ್ನು ಉನ್ನತ ಶಿಕ್ಷಣ ಸ್ಪೋರ್ಟ್ಸ್ ಕೌನ್ಸಿಲ್ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಶಾರದಾ ವಿಲಾಸ್ ಪದವಿ ಕಾಲೇಜು ಪಡೆದುಕೊಂಡಿತು.

೨೦೧೬-೧೭ ಕ್ರೀಡಾ ವರದಿ

  • check icon ದಿನಾಂಕ ೧೯-೦೨-೨೦೧೭ ರಿಂದ ೨೧.೦೨.೨೦೧೭ ವರೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯ ಮಹಿಳಾ ಅಂತರ ವಲಯ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜಿಗೆ ನಾಲ್ಕನೇ ಸ್ಥಾನ ಲಭಿಸಿದೆ.
  • check icon ಸ್ಪೋರ್ಟ್ಸ್ ಪೆವಿಲಿಯನ್ ಮೈದಾನ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ದಿನಾಂಕ ೨೮-೧೦-೨೦೧೬ ರಂದು ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಶ್ರೀ ಪುರುಷೋತ್ತಮ್, ಪ್ರಥಮ ಬಿ.ಕಾಂ ವಿದ್ಯಾರ್ಥಿ ದ್ವಿತೀಯ ಸ್ಥಾನದಲ್ಲಿ ಜಯಗಳಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
  • check icon ದಿನಾಂಕ ೦೬ನೇ ಸೆಪ್ಟೆಂಬರ್ ೨೦೧೬ರ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಾಮುಂಡಿ ವಲಯ ಟೇಬಲ್ ಟೆನ್ನಿಸ್ ಪುರುಷರ ಪಂದ್ಯಾವಳಿಯನ್ನು ನಮ್ಮ ಸಂಸ್ಥೆ ಶೇಷಾದ್ರಿಪುರಂ ಪದವಿ ಕಾಲೇಜು, ಮೈಸೂರು, ಇಲ್ಲಿ ಆಯೋಜಿಸಲಾಗಿತ್ತು.
  • check icon ದಿನಾಂಕ ೧೫ನೇ ಸೆಪ್ಟೆಂಬರ್ ೨೦೧೬ರಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ನಗರ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಶ್ರೀ. ಪುರುಷೋತ್ತಮ್, ಪ್ರಥಮ ಬಿ.ಕಾಂ ಇವರು ತೃತೀಯ ಸ್ಥಾನದಲ್ಲಿ ಜಯಗಳಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

೨೦೧೫-೧೬ ಕ್ರೀಡಾ ವರದಿ

ಕೊಡಚಾದ್ರಿಯಲ್ಲಿ ಸಾಹಸ ಕಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.