ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ಪ್ರಾಮುಖ್ಯತೆಯನ್ನು ಪ್ರಶ್ನಿಸಲು ಪ್ರಾರಂಭಿಸಬಹುದು.
ನಾವು ಕಾಲೇಜುಗಳಿಗೆ ಹೋಗಿ ಏಕೆ ಶಿಕ್ಷಣ ಪಡೆಯಬೇಕು ಎಂಬ ಪ್ರಶ್ನೆ ಅವರಲ್ಲಿ ಸುಳಿದಾಡುತ್ತಿರಬಹುದು. ಈ ಪ್ರಶ್ನೆಗಳಿಗೆ ನಿಖರವಾದ ಉತ್ತರವೇನೆಂದರೆ, ಉನ್ನತ್ತ ಶಿಕ್ಷಣ ಪಡೆದವರಿಗಿಂತ, ಕಾಲೇಜಿಗೆ ಹಾಜರಾಗಿ ಶಿಕ್ಷಣ ಪಡೆದ ಪದವೀಧರರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ವೆಚ್ಚ ಹೆಚ್ಚಿರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹಿಂದೆ ಸರಿಯಬಹುದು. ಆದರೆ, ಇಂದಿನ ಆರ್ಥಿಕತೆಗೆ ಉತ್ತಮ ವ್ಯಾಪ್ತಿಯನ್ನು ಒದಗಿಸುವಲ್ಲಿ ಕಾಲೇಜು ಶಿಕ್ಷಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಏಕೆಂದರೆ, ಪದವೀಧರರಾಗಿ ಉತ್ತಮ ಆದಾಯವನ್ನು ಗಳಿಸಲು ಕಾಲೇಜು ಶಿಕ್ಷಣವು ಅನುವು ಮಾಡಿಕೊಡುತ್ತದೆ. ಇದು ಆಕರ್ಷಕವಾದ ಚಿಂತನೆಯಾಗಿದೆ. ಆದ್ದರಿಂದ, ಗುಣಮಟ್ಟದ ಶಿಕ್ಷಣವನ್ನು ಪಡೆದು ಪದವೀಧರರಾಗಲು ಅಗತ್ಯವಿದೆ.
ಇಂದಿನ ಕಾಲೇಜು ಶಿಕ್ಷಣದ ಪ್ರಾಮುಖ್ಯತೆಯನ್ನು ಕೆಲವು ದಶಕಗಳ ಹಿಂದೆ ಲಭ್ಯವಿದ್ದ ಶಿಕ್ಷಣಕ್ಕೆ ಹೋಲಿಸಬಹುದು. ಅಂತೆಯೇ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಆಧುನಿಕ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೂಲ ಮೌಲ್ಯಗಳನ್ನು ಕಲಿಸುತ್ತಿದೆ ಹಾಗೂ ಭಾವನಾತ್ಮಕ ಉತೃಕ್ಷತೆ ಎರಡನ್ನೂ ಏಕಕಾಲದಲ್ಲಿ ಅಭಿವೃದ್ಧಿಪಡಿಸುವಲ್ಲಿ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ತನ್ನನ್ನು ತೊಡಗಿಸಿಕೊಂಡಿದೆ.
ನಾವು ನಮ್ಮ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಅನುಭವವು ಅತ್ಯುತ್ತಮವಾಗಿರುವಂತೆ ಗಮನ ಹರಿಸುತ್ತೇವೆ ಹಾಗೂ ನಮ್ಮ ಸಂಸ್ಥೆಯ ಬೋಧನಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸುವಲ್ಲಿ ವಿಕಾಸನಗೊಂಡವರಾಗಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಸ್ತು ಮತ್ತು ಕೌಟುಂಬಿಕ ಭಾವನೆಯ ಅನುಭವ ದೊರೆಯುತ್ತದೆ. ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು ಉತ್ತಮ ಆಯ್ಕೆಯಾಗಿದೆ.